ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು

Reblogged from ನಿಲುಮೆ:

Click to visit the original post

ಪವನ್ ಪಾರುಪತ್ತೇದಾರ

ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು.

Read more… 2 more words

Posted in Uncategorized | Leave a comment

ಯಥಾ ಗುರು ಹಾಗೆ ಶಿಷ್ಯ

ರಾಘವೇಂದ್ರ ಭವನದ ಸರ್ಕಲ್ ನ ಬಳಿಯ ಬೇಕರಿಯಲ್ಲಿ ನಾನು ಮತ್ತೆ ಗೆಳೆಯ ಯಾದವ್ ಕೆಟ್ಟದ್ದನ್ನ ಸುಡುತ್ತ ನಿಂತಿದ್ದೆವು. ಹಾಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಕನಸಿನ ಬಗ್ಗೆ ಹೊರಟಿತು. ನಾನು ಹೇಳಿದೆ, ಮಗ ಕನಸು ಕಾಣಬೇಕು ಮಗ ಯಾವಾಗಲು, ಆಗಲೇ ಎತ್ತರಕ್ಕೆ ಬೆಳೆಯಕ್ಕೆ ಸಾಧ್ಯವಾಗೋದು ಅಂತ. ಯಾದವ್ ಒಂದು ರೀತಿಯ ಮಾರ್ಮಿಕವಾದ ನಗು ತೋರಿ ಶಾಸ್ತ್ರೀ ನಿದ್ದೆ ಮಾಡಿದ್ರೆ ತಾನೆ ಮಗ ಕನಸು ಕಾಣಕ್ ಆಗೋದು?? ನಿದ್ದೇನೆ ಇಲ್ಲ ಅಂದ್ರೆ ಕನಸು ಎಲ್ಲಿಂದ ಕಾಣನ ಹೇಳು ಅಂದ.ನಿದ್ದೇನೆ ಮಾಡದೇ ಕನಸು ಕಂಡ್ರೆ ಹಗಲುಗನಸು ಕಾಣಬೇಡ ಅಂತ ಬೈತಾರೆ. ಕನಸು ಕಾಣಕ್ಕದ್ರು  ನಿದ್ದೆ ಮಾಡೋಣ ಅಂದ್ರೆ ಎಲ್ಲಿ ಸ್ವಾಮಿ ಬರುತ್ತೆ ನಿದ್ರೆ?? ಪಕ್ಕದ ಮನೆ ಪದುಮಕ್ಕ ನಮಮ್ಮ ನೀರಿಗೆ ಹೋದಾಗ ಏನ್ರಿ ಗಿರಿಜಮ್ಮ ನಿಮ್ಮ ಮಗ ಅದೇನೋ ಇಂಜಿನಿಯರಿಂಗ್ ಓದಿದ್ದನಲ್ಲ ಕೆಲಸ ಸಿಕ್ತ ಅವನಿಗೆ ಅಂತ ಕೇಳಿದಾಗ ನಮಮ್ಮ ಇಲ್ಲ ಕಣ್ರೀ ಯಾವ್ದೋ recession  ಅಂತ ತೊಂದರೆ ಬಂದಿದೆ ಅಂತೆ ಅದದ್ಮೇಲೆ ಸಿಗತ್ತೆ ಅಂತ ಹೇಳ್ದ ಅಂತ ಹೇಳೋ ಮಾತು ಕೇಳಿದಾಗ, ನಮಪ್ಪ ಅವರ ಹೊಲದಲ್ಲಿ ಕೆಲಸ ಮಾಡುವ ಕೂಲಿಯವರು ಏನ್ ಸಾಮಿ ನಮ್ ಚಿಕ್ ಐನೋರು ಎಲ್ಲನ ಕೆಲಸಕ್ಕೆ ಹೋಗ್ತವ್ರ, ಇಲ್ಲ ಮನೇಲೆ ಮುದ್ದೆ ಮುರಕೊಂಡು ಅವ್ರ ಇನ್ನ ಅಂತ ಕೇಳಿದಾಗ ನನ್ನಪ್ಪ ನನ್ನ ಕಡೆ ನೋಡಿ ಹುಡುಕ್ತ ಇದ್ದನಪ್ಪ ಇನ್ನು ಯಾವಾಗ್ ಸಿಗತ್ತೋ ಗೊತ್ತಿಲ್ಲ ಅಂತ ಹೇಳೋವಾಗ ನೋಡಿ ಇನ್ನು ನನಗೆ ನಿದ್ದೆ ಅದ್ರು ಎಲ್ಲಿ ಬರಲು ಸಾಧ್ಯ?? ನನಗೆ ಮಾತ್ರ ಅಲ್ಲ ಸ್ವಾಭಿಮಾನ ಇರುವ ಯಾವುದೊ ವ್ಯಕ್ತಿಗೂ ನಿದ್ದೆ ಬರಲ್ಲ ಇನ್ನು ಕನಸು ಕಾಣುವುದು ಬಹಳ ದೂರದ ಮಾತು ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟ.

 ಸಮಾಜ ಎಷ್ಟು ಬದಲಾಗಿಬಿಟ್ಟಿದೆ ಅಲ್ವಾ?? ಇಲ್ಲ ನಾವೇ ಬದಲಾಗಿದ್ದಿವ?? ಮೊದಲಿಗೆ ೧೦ನೇ ಕ್ಲಾಸ್ ಓದಿದರೆ ಸಾಕು ಕೆಲಸ ಸಿಕ್ತಿತ್ತಂತೆ ನಮ್ ತಾತ ಓದಿದ್ದು ಬರಿ ೭ನೇ ಕ್ಲಾಸು ಲೋವೆರ್ ಸೆಕೆಂಡರಿ ಅಂತೆ, ಅವರು ನಮ್ಮೂರಲ್ಲಿ ಫೇಮಸ್ ಎಲೆಕ್ಟ್ರಿಕ್ contractor. ಇನ್ನು ನಮ್ಮ ತಂದೆ PUC ಓದಿದಕ್ಕೆ ಎಷ್ಟೋ ಸರ್ಕಾರೀ ಕೆಲಸಗಳು ಬಂದಿದ್ದವಂತೆ.ನಮ್ಮ ಅಣ್ಣಂದಿರು ಡಿಗ್ರಿ ಓದಿ ಒಳ್ಳೆಯ ಕಡೆ ಕೆಲಸಗಳಲ್ಲೂ ಇದ್ದಾರೆ. ಆದ್ರೆ ಈಗ ಇಂಜಿನಿಯರಿಂಗ್ ಮಡಿ MBA  ಮಾಡಿ. MA ಗಳು MCA ಗಳು ಎಲ್ಲ ಮಾಡಿಯೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿರುತ್ತಾರೆ. ಮೊನ್ನೆ ಮೊನ್ನೆ syntel ಎಂಬ ಕಂಪನಿ ಗೆ ವಾಕ್-ಇನ್ ಇಂಟರ್ವ್ಯೂ ಗೆ ಎಂದು ಹೋಗಿದ್ದೆ. ಇದ್ದ ಉದ್ಯೋಗಾವಕಾಶ ಸುಮಾರು ೬೦ ಅಂತೆ ಅಲ್ಲಿ ೬೦೦೦ ಕ್ಕೂ ಹೆಚ್ಚು ಜನ ಗೇಟ್ ನ ಹೊರಗೆ ಕಾಯುತಿದ್ದೆವು. ಅದರಲ್ಲಿ ೩೦೦೦ ಉತ್ತರ ಭಾರತೀಯರು ಒಂದು ೨೦೦೦ ತಮಿಳುನಾಡು ಮತ್ತು ಆಂಧ್ರ ಮತ್ತು ಕೇರಳಿಗರು ನಮ್ಮ ಜನ ಸುಮಾರು ೧೦೦೦. ಗೇಟ್ ತೆಗೆದಿದ್ದೆ ತಡ ಒಳ್ಳೆ ತಿರುಪತಿ ವೆಂಕಟರಮಣನ ದರ್ಶನಕ್ಕೆ ಭಕ್ತರು ನುಗ್ಗುವಂತೆ ನುಗ್ಗಲು ಆರಂಭಿಸಿದರು. ನಾನು ನನ್ನ ಗೆಳೆಯ ನುಗ್ಗಲು ಸಾಧ್ಯವಾಗದೆ ಬೇಡ syntel ಸಹವಾಸ ಎಂದು ವಾಪಾಸ್ ಬಂದೆವು. ಇಂತಹ  ಅದೆಷ್ಟೋ  ನಿದರ್ಶನಗಳು  ನಮ್ಮ  ಮುಂದೆ ಇದ್ದೇ ಇವೆ 

ನನ್ನ ಗೆಳೆಯ ಯಾದವ್ ಮತ್ತು ನನ್ನಲ್ಲಿ ಹೀಗೆ ಹಲವರು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ನೆನ್ನೆ ಒಂದು ಚರ್ಚೆ ನಡೀತು. ನನ್ನ ಅಣ್ಣನ ಮಗನ್ನ ಸ್ಕೂಲ್ ಗೆ ಸೇರಿಸಿದ್ದಾರೆ nursery ಗೆ ಅವ್ರು ಕಟ್ಟಿರೋ ಶುಲ್ಕ ೭೦,೦೦೦, ನಾನು ಶಾಲೆಗೆ ಸೇರಿದ ವರ್ಷದಿಂದ ೭ನೆ ತರಗತಿಯವರೆಗೂ ನನ್ನ ಶಾಲೆಯ ಶುಲ್ಕ ವರ್ಷಕ್ಕೆ ೨೭ರು ಮಾತ್ರ ಪ್ರೌಢ ಶಾಲೆಯಲ್ಲಿ ವರ್ಷಕ್ಕೆ ೮೦೦ರು ಮತ್ತು polytechnic ವರ್ಷಕ್ಕೆ ೭೦೦೦, ಮತ್ತು ಇಂಜಿನಿಯರಿಂಗ್ ವರ್ಷಕ್ಕೆ ೩೫೦೦೦. ನನ್ನ ವಿದ್ಯಾಭ್ಯಾಸವೆಲ್ಲ ನನ್ನ ಅಣ್ಣನ ಮಗ ತನ್ನ ಪ್ರೈಮರಿ ಶಿಕ್ಷಣ ಮುಗಿಸೋ ಅಷ್ಟರಲ್ಲಿ ಅಗೋ ಖರ್ಚಲ್ಲಿ ಮುಗಿದು ಹೋಗಿರುತ್ತದೆ ಅಲ್ಲವೇ?? ಅದಕ್ಕೆ ಯಾದವ್ ಹೇಳ್ದ ಮಗಾ ಮೊದಲೆಲ್ಲ ವಿದ್ಯೆ ಕಳಿಸಿ ಗುರುದಕ್ಷಿಣೆ ಕೇಳ್ತಾ ಇದ್ರೂ ಆದರೆ ಈಗ ಮೊದಲೇ ಗುರುದಕ್ಷಿಣೆ ತೊಗೋತಾರೆ ಆದ್ರೆ ಮಕ್ಕಳು ವಿದ್ಯೆ ಕಲಿತರೋ ಇಲ್ಲವೋ ಯಾರು ಕೇರ್ ಮಾಡಲ್ಲ ಅಂತ. ನನಗು ಅನ್ನಿಸ್ತು ಯಾದವ್ ಮಾತು ಶೇಕಡಾ ನುರಕ್ಕಿಂತ ಹೆಚ್ಚು ಸತ್ಯ.

 ನನ್ನ ಮತ್ತೊಬ್ಬ ಗೆಳೆಯ ಒಂದು ಖಾಸಗಿ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿ ಕೆಲಸ ಮಾಡುತಿದ್ದಾನೆ. ಅವನು ಹೊಸತಾಗಿ ಕೆಲಸಕ್ಕೆ ಸೇರಿದ್ದ ಸಮಯ. ತರಗತಿಯಲ್ಲಿ ಬಹಳಷ್ಟು ಅಸಭ್ಯವಾಗಿ ವರ್ತಿಸುತಿದ್ದ ಒಂದಷ್ಟು ಹುಡುಗರಿಗೆ ಬೆಟ್ಟದ ರುಚಿ ತೋರಿಸಿದ್ದಾನೆ. ಅಷ್ಟೇ ಮಾರನೆಯ ದಿನವೇ ಅ ಹೊಡೆಸಿಕೊಂಡ ಮಕ್ಕಳ ತಂದೆ ತಾಯಂದಿರು ಬಂದು ಅವರ ಶಾಲೆಯ  ಮುಖ್ಯೋಪಾಧ್ಯಾಯಿನಿಗೆ  ದೂರು ನೀಡಿದ್ದಾರೆ.  ನನ್ನ ಗೆಳೆಯನನ್ನ ತನ್ನ ಕೊನೆಗೆ ಕರೆಸಿಕೊಂಡ ಮೇಡಂ ನೋಡಪ್ಪ ಮಕ್ಕಳು ಎಷ್ಟಾದರೂ  ತೀಟೆ  ಮಾಡಿಕೊಳ್ಳಲಿ.  ನೀನು ಅವರ ಮೇಲೆ ಕೈ ಮಾಡಬೇಡ, ಅಕಸ್ಮಾತ್ ಮಾಡಿದ್ದೆ ಆದರೆ ನಿನ್ನ ಕೆಲಸ  ಕಳೆದುಕೊಳ್ಳಬೇಕಾದೀತು  ಎಂಬ  ಎಚ್ಚರಿಕೆ  ನೀಡಿದ್ದಾರೆ. ಅದಕ್ಕೆ ನನ್ನ ಗೆಳೆಯ  ಮೇಡಂ  ಒಳ್ಳೆಯ  ಮಾತಿನಲ್ಲಿ  ಕೇಳದಿದ್ದರೆ  ಮಕ್ಕಳನ್ನು ತಿದ್ದುವುದದರು ಹೇಗೆ ಎಂದನಂತೆ. ಅದಕ್ಕೆ ಮೇಡಂ ಅಕಸ್ಮಾತ್ ಅವರು ಒಳ್ಳೆಯ  ದಾರಿ  ಹಿಡಿಯಲಿಲ್ಲವೆಂದರೆ ಅದು ಅವರ  ಕರ್ಮ  ನಿನಗ್ಯಾಕೆ  ಚಿಂತೆ  ಎಂದರಂತೆ.  ಅಪ್ಪಿ ತಪ್ಪಿ  ನಿಂಬೆ ಹುಳಿಯನ್ನು  ಮರೆತು  ಬಾಯಲ್ಲೇ  ಇಟ್ಟುಕೊಂಡು ಮೇಡಂ ಕೈಲಿ ಸಿಕ್ಕಿ ಬಿದ್ದರೆ ಗೆಣುವಿನ ಮೇಲೆ  ಬೆತ್ತದಿಂದ  ಹೊಡೆಯುತಿದ್ದ ನಮ್ಮ  ಟೀಚರ್ಗಳೆನಾದ್ರೂ ಈಗಿನ ಕಾಲದ ಮಕ್ಕಳಿಗೆ ಸಿಕ್ಕಿದ್ದರೆ, ಒಂದು ದಿನವು ಮೇಡಂ ಕೆಲಸದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ       

 
ನಮ್ಮ ವಿದ್ಯಾಭ್ಯಾಸ ಪದ್ಧತಿ ಹೇಗಿರುತ್ತದೋ ಮಕ್ಕಳು ಹಾಗೆ ಇರುತ್ತಾರೆ. ಮಕ್ಕಳಿಗೆ ಹೆಚ್ಚು ಹೊಮೆವೊರ್ಕ್ ಕೊಡುವ ಹಾಗಿಲ್ಲ ಮಕ್ಕಳಿಗೆ ಹೊಡೆಯುವ ಹಾಗಿಲ್ಲ, ಅವರಿಗೆ ಮೊಬೈಲ್ ಫೋನ್ ಕೊಡಿಸಬೋಹುದು. ಇಂಟರ್ನೆಟ್ ಮುಂತಾದ ಸುಲಭವಾಗಿ ಅನಾನುಕುಲವಾಗಿಯೂ ಮಾರ್ಪಡಬಲ್ಲ ಅವಕಾಶಗಳನ್ನು ಒದಗಿಸುವುದು ಎಲ್ಲವು ಇದ್ದರೆ ಮಕ್ಕಳ ಭವಿಷ್ಯ ಉದ್ದಾರ. ನಿಮಗೆ ಗೊತ್ತಿರುತ್ತದೆ ಅನುಭವವು ಆಗಿರುತ್ತದೆ ಎಷ್ಟು ಜನ ಹಿಗ್ಹ್ ಸ್ಕೂಲ್ ಮಕ್ಕಳು ಇ ನಡುವೆ ಸಂಜೆ ಶಾಲೆಯಿಂದ ಬಂದೊಡನೆ ಆಟ ಆಡುವುದಕ್ಕೆ ಹೋಗದೆ facebook ನಲ್ಲಿ ಚಾಟಿಂಗ್ ಮಾಡುತ್ತ ಕುಡುತ್ತಾರೆ ಎಂದು.
 

ಎಷ್ಟೇ ಅಗಲಿ ಮಕ್ಕಳ ಭವಿಷ್ಯ ಜೋಪಾನ ಗೆಳೆಯರೇ…….

 

 

 

 

Posted in Uncategorized | Leave a comment

ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ


ಮೊದಲಿಗೆ ನಿಲುಮೆಯ ಎಲ್ಲ ಓದುಗರಿಗೆ ಸ್ವಾತಂತ್ರ್ಯದಿನದ ಶುಭಾಶಯಗಳು. 64 ನೆ ಸ್ವತಂತ್ರ ದಿನದ ಆಚರಣೆ ಎಲ್ಲ ಕಡೆ ಭರ್ಜರಿಯಿಂದ ಸಾಗಲಿ ಎಂದು ಆಶಿಸೋಣ. ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಸಿಕ್ಕಿದ ವಿಷಯ ನಮಗೆಲ್ಲ ತಿಳಿದಿದ್ದೆ. ಇಂದು ನಮಗೆ ಅ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಸಿಕ್ಕಿದೆಯೆಂದರೆ ನಮ್ಮ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸುವ ಮಟ್ಟಿಗೆ ಸಿಕ್ಕಿದೆ. ನಾ ಬೇಕಾದರೆ ಬಾಜಿ ಕಟ್ಟುತ್ತೇನೆ ನಾಳಿನ ಪೇಪರ್ ನೋಡಿ ನಮ್ಮ ರಾಜ್ಯದಲ್ಲೇ ಒಂದೆರಡು ಕಡೆಯಾದರು ಧ್ವಜವನ್ನು ಉಲ್ಟಾ ಹಾರಿಸಿರುತ್ತಾರೆ. ಬ್ರಿಟಿಷರ ದಬ್ಬಾಳಿಕೆ ಹದ್ದು ಮೀರಿದಾಗ ಹಿಂಸೆಯ ನಾನಾ ಮಾರ್ಗಗಳು ಪ್ರಯೋಗಿಸಿ ಹುತಾತ್ಮರಾದವರು, ನಂತರ ದೇಶವನ್ನೆಲ್ಲ ಒಟ್ಟಿಗೆ ಸಂಘಟಿಸಿ ಅಹಿಂಸೆಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಾಧ್ಯ ಎಂದು ತೋರಿಸಿಕೊಟ್ಟು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಮಹಾತ್ಮರು, ನಮ್ಮ ಈಗಿನ ಸ್ವಾತಂತ್ರ್ಯವನ್ನೇನಾದರು ನೋಡಿದ್ದರೆ ಇವರಿಗೆ ಯಾಕಾದ್ರು ಸ್ವಾತಂತ್ರ್ಯ ಕೊಡಿಸಿದೆವೋ ಎಂದು ಮರುಗುತಿದ್ದರೆನೋ…..

ನನ್ನ ಮಾತುಗಳು ಅತಿಶಯೋಕ್ತಿ ಎನಿಸಬಹುದು. ಆದರೆ ನಮ್ಮ ದೇಶದಲ್ಲಿ ಎಲ್ಲರಿಗು ಎಷ್ಟು ಸ್ವಾತಂತ್ರ್ಯವಿದೆ ಅಂತ ನಿಮಗೆ ಗೊತ್ತು. ಟ್ರಾಫಿಕ್ ಪೋಲಿಸ್ ಡಾಕುಮೆಂಟ್ ಸರಿ ಇದ್ದರು ಲಂಚ ಪಡೆಯುವ ಸ್ವಾತಂತ್ರ್ಯ, ಖಾತೆ ಬದಲಾವಣೆ ಮಾಡಿಸಬೇಕಾದರೆ ಪತ್ರ ಸ್ಕಾನ್ನಿಂಗ್ ಮಾಡುವನಿಂದ ಹಿಡಿದು, ಮೊಹರು ಹಾಕುವ ಗುಮಸ್ತನಿಂದ ಹಿಡಿದು, revinue inspector ತನಕ ಲಂಚ ಪಡೆಯುವ ಸ್ವಾತಂತ್ರ್ಯ. ಗೆದ್ದೊಡನೆ ತಮ್ಮ ಕ್ಷೇತ್ರದ ಜನತೆಯನ್ನು ಮರೆತು ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಸ್ವಾತಂತ್ರ್ಯ, ಪಕ್ಷದ ತತ್ವ ಸಿದ್ಧಾಂತಗಳನ್ನು ಮರೆತು ಪಕ್ಷಾಂತರ ಮಾಡುವ ಸ್ವಾತಂತ್ರ್ಯ, ರೈತನ ಜಮೀನನ್ನು ಕಸಿದು ಅಧುನಿಕರಣದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಸ್ವಾತಂತ್ರ್ಯ, ನಮ್ಮ ಭೂಮಿಯ ಸಂಪತ್ತಲ್ಲದೆ ಅಂತರಂಗದಲ್ಲಿರುವ ತರಂಗಾಂತರಗಳನ್ನು ಮೋಸದಿಂದ ಮಾರುವ ಸ್ವಾತಂತ್ರ್ಯ, ಇನ್ನು ತಮಾಷೆಯೆಂದರೆ ತಪ್ಪು ಮಾಡಿ ದುಷ್ಕ್ರುತ್ಯಗಳನ್ನೆಸಗಿ ವಾರ್ಷಿಕ ೧೧ ಕೋಟಿ ಹಣವನ್ನು ಸರ್ಕಾರದಿಂದ ಖರ್ಚು ಮಾಡಿಸಿಕೊಳ್ಳೋ ಸ್ವಾತಂತ್ರ್ಯ ಮತ್ತು ತಪ್ಪಿತಸ್ತ ಎಂದು ಖಾತರಿಯಾದ ಮೇಲು ಶಿಕ್ಷೆ ಇಲ್ಲದೆ ಐಶಾರಾಮಿ ಜೀವನ ನಡೆಸುವ ಸ್ವಾತಂತ್ರ್ಯ, ಇಂತಹದ್ದೆನ್ನಲ್ಲ ವಿರೋಧಿಸಿದರೆ ವಿರೋಧಿಸಿದವರ ವಿರುದ್ದವೇ ಕೇಸು ಜಡಿಯುವ ಸ್ವಾತಂತ್ರ್ಯ.ಆಹಾ ಹೇಳುತ್ತಾ ಹೋದರೆ ಪುಟಗಟ್ಟಲೆ ಇಂತಹ ಸ್ವಾತಂತ್ರ್ಯಗಳು ಸಿಗುತ್ತವೆ.

ಇಂತಹ ಸ್ವಾತಂತ್ರ್ಯವನ್ನು ನೋಡಿದ ಮೇಲೆ ನಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಡಿದ ನಾಯಕರಿಗೆ ಸಂತೋಷವಗುತ್ತ? ಖಂಡಿತ ಇಲ್ಲ ಯಾರೋ ಒಬ್ಬ ಬ್ರಿಟಿಷ್ ವ್ಯಕ್ತಿ ಹೇಳಿದ್ದನಂತೆ ಭಾರತೀಯರಿಗೆ ಅಳಿ ಅಭ್ಯಾಸವಿಲ್ಲ ಇನ್ನೊಬ್ಬರ ಅಡಿಯಲ್ಲಿದ್ದೆ ಅಭ್ಯಾಸ ಎಂದು. ನಮ್ಮ ಈಗಿನ ನಾಯಕರು ಹೀಗೆ ಭ್ರಷ್ಟರಾಗೆ ಇದ್ದರೆ ಅ ದಿನ ದೂರವಲ್ಲ ಎನಿಸುತ್ತದೆ. ನಮ್ಮ ಹಿರಿಯರು ಕಷ್ಟ ಪಟ್ಟು ನಮಗೆ ಕೊಟ್ಟ ಈ ಸ್ವಾತಂತ್ಯ ಎಂಬ ಉಡುಗೊರೆ ಮತ್ತೆ ನಮ್ಮ ಕೈ ತಪ್ಪಿ ಹೋಗಬಹುದಾದೀತು. ಈಗಾಗಲೇ ನಮ್ಮ ಅಂತರಿಕ ವಿಷಯಗಳಲ್ಲಿ ಬೇರೆ ದೇಶಗಳು ಮುಗು ತೂರಿಸುವ ಎಷ್ಟೋ ಪ್ರಯತ್ನಗಳು ನಡೆದಿವೆ. ನಮ್ಮ ಬೆಳವಣಿಗೆ ಬಹಳ ದೇಶಗಳ ಹೊಟ್ಟೆ ಉರಿಸಿದೆ ಪಕ್ಕದಲ್ಲಿರುವ ಪಾಕಿಸ್ತಾನ ಚೀನಾಗಂತೂ ದಯದಿ ಮತ್ಸರ ನಮ್ಮ ಮೇಲೆ.

ಇಂತಹ ಒಂದು ರಾಷ್ಟೀಯ ಹಬ್ಬದ ಸಮಯದಲ್ಲಿ ನಾವು ಬ್ರಷ್ಟಚಾರದ ವಿರುದ್ಧ ಧ್ವನಿ ಎತ್ತಲು ಪ್ರಾರಂಭಿಸೋಣ. ಲಂಚ ಕೊಡುವುದನ್ನು ನಿಲ್ಲಿಸೋಣ. ಭ್ರಷ್ಟಚಾರಿಗಳನ್ನು ಅಸಮರ್ಥರನ್ನು ಆಯ್ಕೆ ಮಾಡುವುದು ಬೇಡ. ಭ್ರಷ್ಟರ ವಿರುದ್ಧ ನಮ್ಮಿಂದ ಹೋರಾಡಲು ಸಾಧ್ಯವಿಲ್ಲದಿದ್ದರೆ ಕನಿಷ್ಠ ಹೋರಾಡುವವರಿಗಾದರು ಬೆಂಬಲಿಸೋಣ.ಇಲ್ಲವಾದಲ್ಲಿ ನಮ್ಮ ಮೊಮ್ಮಕ್ಕಳು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಶುರು ಮಾಡಬೇಕಾಗುವುದೇನೋ ನಮ್ಮ ಸಿದ್ಧಲಿಂಗಯ್ಯನವರ ಪದ್ಯ ಹಾಡುತ….

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ

*******************************************************

Posted in Uncategorized | Leave a comment

ಆಹಾ ಎಷ್ಟು ಮಜವಾಗಿತ್ತು ಆ ಕಾಲಾ…….!!!!

ನಮ್ಮ ತಾತಂದಿರು ಹಳೆ ಕಾಲದ ಕಥೆಗಳನ್ನು ಹೇಳುವಾಗ ಮೊದಲು ಸ್ವಲ್ಪ ಸಮಾಧಾನದಿಂದ ಕೇಳ್ತೇವೆ ಬರು ಬರುತ್ತಾ ಅವರು ಅದೇ ಕಥೆಗಳನ್ನು ಮತ್ತೆ ಮತ್ತೆ ಹೇಳುತ್ತಾರೆ ನಮಗೂ ಬೋರ್ ಅನಿಸಿ ತಾತಾ ಎಷ್ಟು ಸಲಿ ಅದೇ ಕಥೆಗಳನ್ನ ಹೇಳ್ತಿರ ಅಂತ ಗೊಣಗಿಕೊಂಡು ಎದ್ದು ಹೋಗ್ತಿವಿ. ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗು ಆಗ್ತವೆ. ನನಗು ಹಾಗೇ ನಮ್ಮ ತಾತ ಕಥೆಗಳನ್ನ ಹೇಳ್ತಾ ಇದ್ರೂ ಅವರು ತಮ್ಮ ಬ್ರಿಟಿಶ್ ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ ಚಕ್ಕರ್ ಹಾಕಿದ್ದು, ಆಗಿನ ಕಾಲಕ್ಕೆ ಲೋಯರ್ ಸೆಕೆಂಡರಿ ಮುಗಿಸಿ ಕುಟುಂಬದಲ್ಲಿ ಹೆಸರು ಮಾಡಿದ್ದೂ, ಊರಿಗೆ ಮೊದಲನೇ ಎಲೆಕ್ಟ್ರಿಕ್ contractor ಆಗಿದ್ದು, ಊರಿನ ಪ್ರೆಸಿಡೆಂಟ್ ಆಗಿದ್ದು, ಆಗಿನ ಜನ ಹಾಗೆ ಹೀಗೆ ಹುಹ್ ಇನ್ನು ಬಹಳಾ. ಆದರೆ ನಾವು ಅವರು ಕಥೆ ಹೇಳುವಾಗ ಮುಗು ಮುರಿದು ಹೋಗುತಿದ್ದೆವಲ್ಲ, ನಮಗೆಲ್ಲಿ ಅರಿವಿತ್ತು ಆಗಿನ ಅ ಕಾಲದ ಬಗ್ಗೆ ಎಷ್ಟು ಹೇಳಿದರು ಮತ್ತೆ ಮತ್ತೆ ನಮ್ಮ ತಾತನವರಿಗೆ ಹೇಳಬೇಕು ಎನಿಸಿತ್ತು ಎಂದು. ಯಾಕಂದರೆ ಅ ಕಾಲವೇ ಹಾಗಿತ್ತು ಎಷ್ಟು ಅದರ ಬಗ್ಗೆ ಕೊಂಡಾಡಿದರು ಸಾಲದಂಥ ಕಾಲ. ನನಗೆ ಯಾಕೆ ಹೀಗನಿಸಿತ್ತು ಅಂದರೆ ನನಗೂ ಸಹ ಕಳೆದ ಹತ್ತು ವರ್ಷಕ್ಕೂ ಇಗ್ಗು ಬಹಳ ವ್ಯತ್ಯಾಸ ಕಾಣುತ್ತಿದೆ. ನನಗೆ ಇತ್ತೀಚಿಗಷ್ಟೇ ಇದರ ಅರಿವಾಯಿತು.

ರಾಗಿ ಬೆಳೆ ಬಲೆ ಚೆನ್ನಾಗೈತೆ ಸ್ವಾಮಿ, ಈ ಸಲ ಒಳ್ಳೆ ಬಂಪರ್ ಕಾಸ್ ಮಾಡ್ತ್ಯ ಅಂತ ಚಿಕ್ಕಣ್ಣ ಹೇಳಿದಾಗ ನಮ್ಮಪ್ಪನಿಗೆ ಒಂಥರಾ ಸಂತೋಷ. ಅಂತು ಟೈಮ್ ಗೆ ಸರ್ಯಾಗಿ ಉಳಿಸಿ, ಬಿತ್ತನೆ ಮಾಡಿಸಿ, ಗೊಬ್ಬರ ಚೆಲ್ಲಿ, ಕಳೆ ಒರೆದು, ಗುಂಟುವೆ ಹಾಕಿಸಿ, ಇರೋ ಮುಕ್ಕಾಲು ಎಕರೆಗೆ 10 ಸಾವಿರ ಖರ್ಚ ಮಾಡಿದ್ದಕ್ಕೆ ಇಷ್ಟ ಮಾತ್ರ ಬೆಳೆ ಆಗಿರೋದು ಚಿಕ್ಕಣ್ಣ ಅಂತ ಸ್ವಲ್ಪ ಬಿಂಕದಿಂದನೆ ಅಂದ್ರು. ಅಂಗಲ್ಲ ಸ್ವಾಮಿ ರೇಟ್ ಚೆನ್ನಾಗೈತೆ ಈಗ ಕೆಂಪು ರಾಗಿ 13 ರೂಪಾಯಿಗೆ ತೊಕೊತಾರೆ ಅಂತ ಚಿಕ್ಕಣ್ಣ ಹೇಳೋವಾಗ ಮಧ್ಯಕ್ಕೆ ಬಾಯಿ ಹಾಕಿ ನಮ್ಮಪ್ಪ ನಂದೊಂದು ೧೫ ಮೂಟೆ ಆಗ್ತದಲ್ಲ ಚಿಕ್ಕಣ್ಣ ಅಂದ್ರು ಸ್ವಲ್ಪ ಹೊತ್ತು ಯೋಚನೆ ಮಾಡಿ ಇನ್ನ ಒಂದು ಹೆಚ್ಚೇ ಆಗ್ತದೆ ಸ್ವಾಮಿ ಅಂದ ಚಿಕ್ಕಣ್ಣ. ನಮ್ಮಪ್ಪ ಸರಿ ಹಾಗಾದ್ರೆ ನಲೇನೆ ಕೂಲಿಯವರನ್ನ ಕರೆಸಿಬಿಡು ಕುಯ್ಯಿಸಿಬಿಡನ ಅಂದ್ರು.ಹಗೆ ಮುಂದುವರೆಸಿ ಕೂಲಿ ಏನ್ ಓದ್ತಾ ಇದೆ ಅಂದ್ರು ಚಿಕ್ಕಣ್ಣ ಗಂಡಿಗೆ ೨೫೦ ಹೆಣ್ಣಿಗೆ ೨೨೦ ಅಂದ ಅಷ್ಟೋಂದ ಅಂದ್ರು ನಮಪ್ಪ ಆಶ್ಚರ್ಯದಿಂದ, ಅದಕ್ಕೆ ಚಿಕ್ಕಣ್ಣ ಇಷ್ಟಕ್ ಸಿಗೋದು ನಮ್ ಕೂಲಿಯವರು ಮಾತ್ರ ಸ್ವಾಮಿ ಅಂದ. ನಮಪ್ಪನು ಸರಿ ಹಾಗೆ ಮಾಡಪ್ಪ ಅಂದ್ರು. ಚಿಕ್ಕಣ್ಣ ಸರಿ ಸ್ವಾಮಿ, ಸ್ವಲ್ಪ ಎಲೆ ಅಡಿಕೆ ತರಕ ಏಳಿ ಅಮ್ಮಣ್ಣಿ ಯವರಿಗೆ ಅನ್ನೋ ಅಷ್ಟರಲ್ಲಿ ನಮ್ಮಮ್ಮ ಒಂದಷ್ಟು ವಿಲ್ಯದೆಲೆ ಅಡಿಕೆ ತಂದು ಕೈಗಿಟ್ರು. ಸರಿ ನಾಳೆಗೆ ಕುಲಿಯವ್ರನ್ನ ನೋಡ್ಬೇಕು ಬರ್ತೀನಿ ಸ್ವಾಮಿ ಅಂತ ಹೇಳಿ ಚಿಕ್ಕಣ್ಣ ಹೊರಟ.

ರಾಗಿ ತೆನೆ ಬಲಿತಿತ್ತು. ಒಂದೊಂದು ತೆನೆಯು ಹಿಡಿದರೆ ಕೈ ತುಂಬಾ ಸಿಗುವಷ್ಟು ದಪ್ಪ, ನೋಡುತಿದ್ದರೆ ನಮ್ಮ ದೃಷ್ಟಿಯೇ ತಗುಲ ಬಹುದೆಂದು ಮಧ್ಯೆ ಒಂದು ದೃಷ್ಟಿ ಬೊಂಬೆ ಕಟ್ಟಿದ್ದರು ನಮ್ಮಪ್ಪ.ನನ್ನ ಕರೆದು ಮಾರನೆಯ ದಿನ ಚಿಕ್ಕಣ್ಣ ಒಂದು ೧೦ ಜನ ಕುಲಿಯವರನ್ನ ಕರೆದು ಕೊಂದು ಬರ್ತಾನೆ ಕುಲಿಯವರಿಗೆ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನ ಮಾಡಿಸಿಬಿಡು ಅಂದ್ರು, ನಮಮ್ಮನಿಗೆ ಕುಲಿಯವರಿಗೆ ಎಲೆ ಅಡಿಕೆ ತೆಗೆದಿಡು ಅಂತ ಹೇಳಿದ್ರು. ನ ಹೋಗಿ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನಕ್ಕೆ ಆರ್ಡರ್ ಕೊಟ್ಟು ಬರುವಷ್ಟರಲ್ಲಿ ನಮ್ಮ ಅಪ್ಪ ಹೊಲದ ಮಧ್ಯ ನಿಂತು ನಾಳೆ ಇದೆಲ್ಲ ಕೂಲಿಯವರು ಕುಯ್ದು ಕಟ್ಟು ಕಟ್ಟುತಾರೋ ಅಂದ್ರು ಒಹ್ ಹೌದ ಸರಿ ಅಪ್ಪ ಅಂತ ನಾನು ತಲೆ ಆಡಿಸಿದೆ

ಮಾರನೆಯ ದಿನ ಬೆಳಿಗ್ಗೆ 9 ಆಯಿತು ಕೂಲಿಯವರು ಬಂದಿಲ್ಲ 9 -30 ಆಯಿತು ಬಂದಿಲ್ಲ ನಮಪ್ಪನಿಗೆ ಯಾಕೋ ಏನೋ ಎಡವಟ್ಟು ಆಗಿದೆ ಅಂತ ಅನ್ನಿಸ್ತು ನನ್ನ ಕರೆದು ಹೋಗಿ ಚಿಕ್ಕಣ್ಣನ ಮನೆಗೆ ಹೋಗಿ ನೋಡ್ಕೊಂಡು ಬಾರೋ ಅಂದ್ರು. ನಾ ಸರಿ ಹೊರಡ್ತೀನಿ ಅನ್ನೋ ಅಷ್ಟರಲ್ಲಿ 10 ಆಗಿತ್ತು ಅಷ್ಟರಲ್ಲಿ ಚಿಕ್ಕಣ್ಣ ಸಹ ಒಂದು ತಂಡ ಕಟ್ಕೊಂಡು ಹೊಲದೊಳಗೆ ಕಾಲಿಟ್ಟ. ಒಟ್ಟು ಹತ್ತು ಜನ ೬ ಹೆಂಗಸರು ೪ ಗಂಡಸರು. ನಮಪ್ಪ ಸ್ವಲ್ಪ ಕೋಪದಿಂದ ಏನ್ ಚಿಕ್ಕಣ್ಣ ಇದು ಬಾರೋ ಟೈಮ್ ಅ ಅಂದ್ರು ಅದಕ್ಕೆ ಆಟ ಸ್ವಾಮಿ ಈಗೆಲ್ಲ ಇಷ್ಟೇ ಸ್ವಾಮಿ ಕೆಲಸಕ್ಕೆ ಹಿಡಿಯೋದೇ ೧೦ ಘಂಟೆಗೆ ಹಳೆ ಕಾಲದ ತರ ೯ ಕ್ಕೆ ಯಾರು ಬರಲ್ಲ ಅಂದ ನಮಪ್ಪಂಗೆ ಸ್ವಲ್ಪ ಕೋಪ ಬಂದ್ರು ಸರಿ ಶುರು ಮಾಡ್ರಿ ಅಂದ್ರು.ಅಪ್ಪನಿಗೆ ಜರೂರು ಕೆಲಸ ಇದ್ದರಿಂದ ನನ್ನ ನೋಡ್ಕೊಳಕ್ಕೆ ಹೇಳಿ ಹೊರಟರು

ಕೆಲಸಕ್ಕೆ ಕೂತವರು ನಾನು ಅಲ್ಲೇ ಇದ್ದದನ್ನ ನೋಡಿ ಹೋಗಿ ಅಮ್ಮನಿಗೆ ಕಾಪಿ ಮಾಡಕ್ಕೆ ಹೇಳಪ್ಪಿ ಅಂದ್ರು. ಸರಿ ಅಂತ ಹೇಳಿ ಕಾಫೀ ಮಾಡಿಸಿಕೊಂಡು ಹೋಗೋ ಅಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಹೋದೊಡನೆ ಕಾಫೀ ಕುಡಿದು ಮತ್ತೆ ಕೆಲಸ ಹಿಡಿದರು ಆಗ ಸುಮಾರು ೧೧ ಆಗಿರಬಹುದು ಹೋಗಪ್ಪ ಎಲೆ ಅಡಿಕೆ ತೆಗೆದುಕೊಂಡು ಬಾ ಅಂದ್ರು ಮತ್ತೆ ಮನೆಗೆ ಬಂದು ಎಲೆ ಅಡಿಕೆ ತೆಗೆದುಕೊಂಡು ಹೋಗುವಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಬಂದಿದ್ದು ನೋಡಿದವರೇ ಕೆಲಸ ಮಾಡುತಿದ್ದಂತೆ ನಟಿಸಿ ಎಲೆ ಅಡಿಕೆ ತೆಗೆದುಕೊಂಡರು. ಮಧ್ಯಾಹ್ನ 12 -45 ಆಯಿತು, ಉಟ ರೆಡಿ ಆಗೈತ ಅಂತ ಚಿಕ್ಕಣ್ಣ ಕೇಳ್ದ. ಗಾಡಿಲಿ ಒಬ್ಬ ಕೂಲಿಯವ್ನ ಕೂಡಿಸ್ಕೊಂದು ರಾಘವೇಂದ್ರ ಭವನ್ ಅಲ್ಲಿ ಆರ್ಡರ್ ಕೊಟ್ಟಿದ್ದ ಚಿತ್ರಾನ್ನ ತಂದೆ. ಎಲ್ಲರು ಚೆನ್ನಾಗಿ ತಿಂದು ಮತ್ತೊಮ್ಮೆ ಎಲೆ ಅಡಿಕೆ ಜಿಗಿಯುತ್ತ ಹರಟೆ ಹೊಡೆಯುತ್ತಾ ಕೂತರು. ಸಮಯ 1 -30 ಆಯಿತು, ನಾನು ಏಳ್ರಿ ಕೆಲಸ ಹಿಡಿರಿ ಅಂದೆ, ಅದಕ್ಕೆ ಚಿಕ್ಕಣ್ಣ ಇರು ಸ್ವಾಮಿ 2 ಘಂಟೆ ಅಗಲಿ ನಮಗೇನು ವಿಶ್ರಾಂತಿ ಬೇಡ್ವ ಅಂದ. ನಾ ಏನೋ ಇವರನ್ನ ಹಿಂಸೆ ಮಾಡ್ತಾ ಇದ್ದಿನೇನೋ ಅನ್ನಿಸ್ಬಿಡ್ತು ನಂಗೆ ಉತ್ತರ ಏನು ಕೊಡಬೇಕು ಅಂತ ತೋಚದೆ ಸರಿ ಸರಿ ಅಂದೆ

2 ಘಂಟೆಗೆ ಶುರು ಮಡಿದ ಕೂಲಿಯವರು 5 -15 ಕ್ಕೆ ಎಲ್ಲ ಹೊರಟರು. ಇನ್ನು ಎಲ್ಲ ಸಾಲುಗಳಲ್ಲೂ 15 ಅಡಿ ಅಷ್ಟು ಮಾತ್ರ ಕೆಲಸ ಉಳಿದಿತ್ತು. ನಾನು ಏನ್ ಚಿಕ್ಕಣ್ಣ ಇನ್ನ 5 -15 ಅಂದೆ. ಸ್ವಾಮಿ ಇನ್ನೇನು 7 ಘಂಟೆ ತನಕ ಕೆಲಸ ಮಾಡ್ತಾರ ಕೂಲಿ ಕೊಡ್ರಿ ಅಂದ ಏನು ಮಾಡಲು ತೋಚದೆ ಮಾತನಾಡಿದಂತೆ ಗಂಡಾಳಿಗೆ 250 ಹೆಂಗಸಿಗೆ 220 ರು ಕೊಟ್ಟೆ. ನಾಳೆ ಇರೋ ಬಾಕಿ ಕೆಲಸಕ್ಕೆ 4 ಅಳು ಬೇಕು ಅಂದ, ನಾನು ಬೇಡಪ್ಪ ಒಪ್ಪಂದ ಕೊಡ್ತೀನಿ ಒಟ್ಟಿಗೆ 600 ತೊಗೊಂಡು ಮಾಡ್ಬಿಡು ಅಂದೆ. ಸರಿ ಅಂತ ಮಾರನೆಯ ದಿನ ಬೆಳಿಗ್ಗೆ ಒಂಭತ್ತಕ್ಕೆ ಬಂದು 11 ಘಂಟೆ ಅಷ್ಟರಲ್ಲಿ ಕೆಲಸ ಮುಗಿಸಿ ದುಡ್ಡು ತೊಗೊಂಡು ಮಾರನೆಯ ದಿನ ಬಂದು ವಾಮೆ ಹಾಕಿ ಕೊಡುತ್ತೇನೆ ಅಂತ ಹೇಳಿ ಹೊರಟೇಬಿಟ್ಟ…

ಮಾರನೆಯ ದಿನ ಚಿಕ್ಕಣ್ಣ ಎಷ್ಟು ಹೊತ್ತಾದರೂ ಬರ್ಲಿಲ್ಲ. ಸಂಜೆ ಹೋದಾಗ ಬೇರೆ ಕಡೆ ಕೂಲಿ ಹೆಚ್ಚು ಕೊಡ್ತಾರೆ ಅಂತ ಲ್ಲಿ ಹೋಗಿದ್ದೆ ಅಂದ. ಸರಿ ನಾಳೆ ಬಾರಪ್ಪ ಅಂದ್ರೆ ನಾಳೆ ಅಲ್ಲಿ ಕೆಲಸ ಬಾಕಿ ಇದೆ ಮುಗಿಸಿ ನಾಡಿದ್ದು ಬರ್ತೀನಿ ಅಂದ. ಒಣಗಿದಷ್ಟು ಒಳ್ಳೇದು ಎಂದು ನಾವು ಆಯಿತು ಅಂದೆವು. ಎರಡು ದಿನದ ನಂತರೆ ಬೆಳಗಿನ ಜಾವವೇ ಭಾರಿ ಮಳೆ ಶುರುವಾಯಿತು, ನಾನು ನಮಪ್ಪ ಒಂದೆರಡು ಸಾಲು ಕಟ್ಟುಗಳನ್ನ ಎತ್ತಿ ನೆನೆಯದ ಜಾಗಕ್ಕೆ ಹಾಕಿದೆವು. ಮಿಕ್ಕಿದ್ದು ಎತ್ತಲು ಸಾಧ್ಯವಾಗಲಿಲ್ಲ ಮಳೆ ಒಂದೇ ಸಮನೆ ಜಡಿ ಹಿಡಿದು ಮೂರೂ ದಿನ ಸುರಿಯಿತು.ಮಳೆಲಿ ತೆನೆ ಅಷ್ಟೊಂದು ನೆಂದ ಕಾರಣ ರಾಗಿ ಕಪ್ಪಾಯಿತು. ಬರಿ ೭ ಮೂಟೆ ಆಯಿತು. ಹುಲ್ಲು ಮುಗ್ಗಿ ಪುಡಿ ಪುಡಿ ಆಗಿತ್ತು. ಕಟ್ಟು ಕಟ್ಟಿಸಿ ತುಳಿಸಿ ತೂರಿಸಿ ಎಲ್ಲ ಮಾಡಲು ಖರ್ಚು ೫೦೦೦ ದಾಟಿತ್ತು. ಒಟ್ಟು ಸೇರಿ ಸುಮಾರು ೧೫೦೦೦ ಖರ್ಚು ಆದರೆ ಲಾಭ ಮಾತ್ರ ಏನು ಇಲ್ಲ. ನಮ್ಮದು ಬರಿ ಮುಕ್ಕಾಲು ಎಕರೆ 5 ಎಕರೆ 10 ಎಕರೆ ಬೇಸಾಯ ಮಾಡುವವರ ಕಷ್ಟ ಹೇಗಿರಬಹುದು ಎಂದು ಯೋಚಿಸಿ, ಅದಕ್ಕೆ ರೈತ ಆತ್ಮ ಹತ್ಯೆ ಮಾಡಿಕೊಳ್ಳುವುದು ಎಂಬ ಅರಿವಾಯಿತು

೧೦ ವರ್ಷದ ಹಿಂದೆ ಹೀಗಿರಲಿಲ್ಲ ಕೆಲಸಕ್ಕೆ ೯ ಘಂಟೆಗೆ ಬರುತಿದ್ದರು. ಮೈ ಗಳ್ಳತನ ಮಾಡುತ್ತಿರಲಿಲ್ಲ, ಅತಿ ಅಸೆ ಪಡುತ್ತಿರಲಿಲ್ಲ, ಹಿಡಿದ ಕೆಲಸ ಮುಗಿಯುವವರೆಗೂ ಬೇರೆ ಕೆಲಸ ಒಪ್ಪಿಕೊಳ್ಳುತ್ತಿರಲಿಲ್ಲ. ಬೇಕೆಂದೇ ಇವತ್ತಿನ ಕೆಲಸ ನಾಳೆಗೆ ಮುಂದೂಡಿ ಹಣಕ್ಕಾಗಿ ಅಸೆ ಪಡುತ್ತಿರಲಿಲ್ಲ. ಆದರೆ ಈಗ ಎಲ್ಲವು ಅಯೋಮಯ ಆಗ ಕುಲಿಯವರಿಗೆ ನಾವು ಕೆಲಸ ಮಾಡಿ ಎಂದು ಹೇಳಲೇ ಬೇಕಾಗಿರಲಿಲ್ಲ. ತಮ್ಮ ಕೆಲಸ ತಾವು ಮುಗಿಸುತಿದ್ದರು, ಇಲ್ಲವಾದರೆ ತಿಂದ ಅಣ್ಣ ಮೈಗೆ ಹತ್ತಲ್ಲ ಸ್ವಾಮಿ ಅಂತಾಇದ್ರು. ಬರಿ ಹತ್ತು ವರ್ಷದ ಹಿಂದೆಯೇ ಅಷ್ಟು ನಿಯತ್ತು ಇದ್ದಿದ್ದರೆ ಇನ್ನು ನಮ್ಮ ತಾತ 70 ವರ್ಷದ ಹಿಂದಿನ ವಿಷಯದ ಬಗ್ಗೆ ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಅಲ್ಲವೇ ಗೆಳೆಯರೇ…….!!

Posted in Uncategorized | Leave a comment

ಪ್ರೀತಿ ಕುರುಡಾದರೂ ಪ್ರಿತಿಸುವವರು ಕುರುಡಾಗದಿರಲಿ

                ಅಗ್ರಹಾರದ ಶಾಮಣ್ಣನವರಿಗೆ ತಮ್ಮ ಮಗಳನ್ನ ಬ್ಯಾಂಕ್ ಮ್ಯಾನೇಜರ್ ಮಾಡಬೇಕಂಬ ಅಸೆ ಇತ್ತು,. ಮಗಳಿಗೆ SSLC ವರೆಗೂ ಹಳ್ಳಿಯಲ್ಲಿನ ಶಾಲೆಯಲ್ಲಿ ಓದಿಸಿದರು, ಪ್ರತಿದಿನ ಮಗಳನ್ನ ಶಾಲೆಗೆ ಕರೆದೊಯ್ಯುವುವುದು ಮತ್ತೆ ಕರೆತರುವುದು ಅವರದೇ ಕೆಲಸ. ಮನೆಗೆ ಕರೆ ತಂದೊಡನೆ ಮುದ್ದಾಗಿ ಮಾತನಾಡಿಸಿ ಶಾಲೆಯ ಬಗ್ಗೆ ವಿಚಾರಿಸುವುದು ಇವೆಲ್ಲ ನಡೆಯುತ್ತಿತ್ತು. ಆದರೆ ಹಳ್ಳಿಯಲ್ಲಿ ಕಾಲೇಜ್ ಇಲ್ಲದಿದ್ದರಿಂದ ಅನಿವಾರ್ಯವಾಗಿ ಪಕ್ಕದ ಪಟ್ಟಣಕ್ಕೆ ಸೇರಿಸಬೇಕಾಯ್ತು, ಪ್ರತಿ ದಿನ ಬಸ್ ಅಲ್ಲಿ ಪ್ರಯಾಣ ಮಗಳು ಮನೆಯಿಂದ ಹೊರ ಮತ್ತೆ ಸಂಜೆ ಬರುವ ವರೆಗೂ ಅವಳದ್ದೇ ಚಿಂತೆ ಶಾಮಣ್ಣ ಮತ್ತು ಅವರ ಹೆಂಡತಿಗೆ. ಆಗಾಗ ಕಾಲೇಜ್ ಬಳಿ ಹೋಗುತಿದ್ದರು, ಒಂದೆರಡು ಸಲಿ ಅವರು ಹೋದಾಗ ಮಗಳು ಕಾಲೇಜ್ ನಲ್ಲಿ ಇರಲಿಲ್ಲ. ಮಗಳು ಮನೆಗೆ ಬಂದಮೇಲೆ ಕೇಳಿದಾಗ ಸ್ನೇಹಿತೆಯ ಮನೆಗೆ ಓದಲು ಹೋಗಿದ್ದೆ ಎಂದಳು. ಆದರು ಶಾಮಣ್ಣ ನವರಿಗೆ ಏನೋ ಒಂದು ರೀತಿ ಅನುಮಾನ ಮಗಳು ಎಲ್ಲಾದರೂ ತಪ್ಪು ದಾರಿ ತುಳಿಯುತಿರುವಳೋ ಅನ್ನೋ ಭಯ, ಕಾಲೇಜ್ ಹತ್ತಿರದಲ್ಲೇ ಇದ್ದಿದ್ದರೆ ಮೊದಲಿನ ಹಾಗೆ ತಾನೆ ಜೊತೆಯಲಿ ಹೋಗಿ ಬರಬಹುದಾಗಿತ್ತು ಅನ್ನೋ ಯೋಚನೆ ಇನ್ನು ಸ್ವಲ್ಪ ದಿನಗಳಾದ ಮೇಲೆ ಕಾಲೇಜ್ ಗೆ ಹೋದ ಶಾಮಣ್ಣ ನವರ  ಮಗಳು ಮತ್ತೆ ಮನೆಗೆ ತಿರುಗಿ ಬಂದಿಲ್ಲ. ಆಮೇಲೆ ತಿಳಿದ ವಿಷಯ ಅಂದ್ರೆ ಅವಳು ಪಟ್ಟಣದಲ್ಲಿನ ಒಬ್ಬ ಆಟೋ ಡ್ರೈವರ್ ಜೊತೆ  ಓದಿ ಹೋಗಿದ್ದಳು, ಹತ್ತಾರು ಎಕರೆ ಜಮೀನು ಅಸ್ತಿ ಪಾಸ್ತಿ ಎಲ್ಲ ಇದ್ದ ಶಾಮಣ್ಣನವರಿಗೆ  ಮಗಳ ಮಾಡುವೆ ಮಾಡುವುದು ಅಷ್ಟೇನೂ ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಮಗಳು ವಿದ್ಯಾವಂತೆ ಅಗಲಿ ಎಂದು ಅಸೆ ಪಟ್ಟಿದ್ದಕ್ಕೆ ಶಾಮಣ್ಣ ನವರಿಗೆ ಸಿಕ್ಕ ಪ್ರತಿಫಲ ಬಹಳ ವಿಷದನಿಯ. ಬಹಳ ಕಟ್ಟುನಿಟ್ಟಿನ ಬ್ರಾಹ್ಮಣ ಕುಟುಂಬ ಊರಿನ ಜನ ಮಾತ್ರವಲ್ಲದೆ ನೆಂಟರು ಇಷ್ಟರ ಮಧ್ಯೆ ಸಹ ಅವಮಾನ ಪಡುವಂತಾಯಿತು. ಇದ್ದ ಒಬ್ಬ ಮಗಳು ಹೀಗಾದಳಲ್ಲ ಅನ್ನೋ ಚಿಂತೆ ಶಾಮಣ್ಣನವರು ಬದುಕಿರೋವರೆಗೂ ಉಳಿಯಿತು
             ಆದರೆ ಮಗಳು ಹೇಳುವುದೇ ಬೇರೆ, ೧೭ ವರ್ಷ ಬೆಳೆಸಿದಕ್ಷಣ ನನ್ನ ಇಡಿ ಜೀವನವನ್ನ ಯಾರೋ ಗೊತ್ತು ಗುರಿ ಇಲ್ಲದವನ ಜೊತೆ ಕಳೆಯಬೇಕಾ ಎಂದು, ಕನಸುಗಳ ನುಚ್ಚು  ನೂರು ಮಡಿದ ಮೇಲೆ ವಯಸೆಂಬ ಹುಚ್ಚು ಕುದುರೆಯ ಮೇಲೇರಿದಾಗ ಯಾರಿಗೆ ತಾನೆ ತಂದೆ ತಾಯಿಯ ಅಕ್ಕರೆ ನೆನಪಾದೀತು. ತಾಯಿ ಒಂದೊಂದು ತುತ್ತು ಆನ್ನ ತಿನ್ನಿಸುವಾಗ ತನ್ನ ಮಗಳ ಬಗ್ಗೆ ಏನೆಲ್ಲಾ ಆಸೆಗಳನ್ನು ಇಟ್ಟಿರುತ್ತಾಳೆ ಎಂಬ ವಿಷಯ ಮಗಳಿಗೆಲ್ಲಿ ಗೊತ್ತು. ತಂದೆಯು ಗ್ರಾಮದ ಹಿರಿಯರ  ಜೊತೆ ಮಾತನಾಡುವಾಗ ನನ್ನ ಮಗಳನ್ನ ಪಟ್ಟಣದ ಕಾಲೇಜ್ ಗೆ ಕಳಿಸುತ್ತಿದ್ದಿನಿ ಎಂದು ಎಷ್ಟು ಸರಿ ಬೀಗಿದ್ದರೆಂಬುದು ಇ ಹುಡಿಗಿಗೆನು ಗೊತ್ತು. ಅವಳಿಗೆ ಗೊತ್ತಿದ್ದಲ್ಲ ಒಂದೇ ಸಿಂಗಾರವಾದ ಹೊಸ ಆಟೋ ಮೇಲೆ ಇವಳ ಹೆಸರ radium cutting ಇದ್ದರೆ ಅದೇ ಪ್ರೀತಿ, ಕಾಲೇಜ್ ಗೆ ಚಕ್ಕರ್ ಹೊಡೆದು ಅವನ ಜೊತೆ ಸಿನಿಮ ನೋಡಿದರೆ ಅದೇ ಪ್ರೀತಿ, ಅವನ ಎದೆಯ ಮೇಲೆ ಇವಳ ಹೆಸರ ಹಚ್ಚೆ ಹಾಕಿಸಿದ್ದರೆ ಅದೇ ಪ್ರೀತಿ, ಪಟ್ಟಣಕ್ಕೆ ಬಂದಿಳಿದೊಡನೆ ತಾನು ಮಾಡುವ ಕಾಯಕವ ಬಿಟ್ಟು ಇವಳನ್ನು ಊರು ಸುತ್ತಿಸುತಿದ್ದರೆ ಅದೇ ಪ್ರೀತಿ. ಶಾಶ್ವತವಲ್ಲದ ಇ ಮಾಯೆಯ ಹಿಂದೆ ಬಿದ್ದು ತಂದೆ ತಾಯಿಯ ಪ್ರೀತಿಯ ಕಡೆಗಣಿಸಿದಳು ಆದರೆ ಇ ಮಾಯೆ ಹೆಚ್ಚು ದಿನ ಇರುವುದಿಲ್ಲ ಎಂಬ ಅರಿವು ಆಗಲು ಕೇವಲ ೪ ತಿಂಗಳು ಸಾಕಾಯಿತು. ಆಟೋ ಸಂಪಾದನೆಯೆಲ್ಲ ಶೋಕಿ ಮಾಡಲು ಸಿನಿಮ ನೋಡಲು ಸಾಲದ್ದರಿಂದ ಅ ಹುಡುಗ ಮೊದಲಿನಷ್ಟು ಸಮಯ ಮತ್ತು ಪ್ರೀತಿ ಕೊಡಲು ಸಾಧ್ಯವಾಗಲಿಲ್ಲ. ಇದೆ ಕಾರಣಗಳಿಗೆ ಇಬ್ಬರ ನಡುವೆ ಒಡಕು ಉಂಟಾಗಿ  ಜಗಳ ಕದನ ನಡೆದು ತಾರಕಕ್ಕೆರಿ ಮತ್ತೆ ತಂದೆಯ ಮನೆ ಬಾಗಿಲಿಗೆ ಬಂದು ನಿಂತಳು. ಆದರೆ ಅಡಿಕೆಗೆ ಹೋದ ಮನ ಆನೆ ಕೊಟ್ಟರು ಬರುವುದಿಲ್ಲ ಎಂಬಂತೆ, ಶಾಮಣ್ಣನವರು ಮಗಳು ಮನೆಗೆ ಮತ್ತೆ  ಬಂದರು  ಸಹ, ಅವರು ಸಾಯುವವರೆಗೂ ಮಗಳು ಓಡಿ ಹೋಗಿದ್ದರ ಬಗ್ಗೆ ಉರು ಮಾತನಾಡುವುದ ನಿಲ್ಲಿಸುವುದಿಲ್ಲ. ತಮ್ಮ ಮುದ್ದಿನ ಮಗಳಿಂದ ನೋವನ್ನು ತಮ್ಮ ರೇಷ್ಮೆ ಶಲ್ಯದ ತುದಿಯಲ್ಲೇ ಗಂಟು ಹಾಕಿಕೊಂಡರು ಶಾಮಣ್ಣ..
   ಸ್ನೇಹಿತರಲ್ಲಿ ನನ್ನ ವಿನಂತಿ ಎಂದರೆ, ದಯವಿಟ್ಟು ತಮ್ಮ ಪ್ರೀತಿಯ ಆಯ್ಕೆ ಜೋಪಾನವಾಗಿರಲಿ. ಪ್ರೀತಿ ಕುರುಡು ಎಂಬ ಗೊಡ್ಡು logic ಗೆ ಬೆಲೆ ಕೊಟ್ಟು ಕಂಡಕಂಡವರನೆಲ್ಲ ಪ್ರಿತಿಸಬೇಡಿ. ನಮ್ಮದು ಅಮೇರಿಕ ಅಲ್ಲ, dating ಸಂಸ್ಕೃತಿ ಬೇಡ, live in together ಗೆ ಹೊಂದಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ನಮ್ಮ ಭಾರತೀಯರಿಗಿಲ್ಲ. flirt ಆದರು breakup ಮಾಡಿಕೊಂಡಮೇಲೆ ಸ್ವಲ್ಪ ದಿನ ನೋವು ತಿನ್ನುವ ಜನ ನಾವು, ಸೊ ಪ್ಲೀಸ್ ಲವ್ ಅಲ್ಲಿ ಬೀಳುವ ಮುಂಚೆ ಹುಡುಗನ ಅಥವಾ ಹುಡುಗಿಯ ಪುರ್ವಪರದ ಬಗ್ಗೆ ತಿಳಿದಿರಲಿ. ಕುಟುಂಬ ಸಮಾಜ ಎಲ್ಲರು ಒಪ್ಪುವಂತ ಹುಡುಗನ್ನ/ ಹುಡುಗಿಯ ಪ್ರೀತಿಸಿ ನಿಮ್ಮ ಪ್ರೀತಿ ಯಾರದೋ ಪ್ರೀತಿಯನ್ನು ಕಳೆದುಕೊಂಡು ಪಡೆದು ಕೊಳ್ಳುವಂತದ್ದಾಗಿರಬಾರದು,  ನಿಮ್ಮ ಪ್ರೀತಿಯಿಂದ ಎಲ್ಲರು ಮತ್ತಷ್ಟು ಬೆರೆತು ಜೀವನ ಸಂತಸಮಯವಗಿರಬೇಕು ಅ ರೀತಿ ಪ್ರೀತಿಸಿ best of luck my dear friends :) .
                                                                                                                       ಸ್ನೇಹದಿಂದ ಪವನ್ :-
*********************************************************************************
Posted in Uncategorized | Leave a comment

ಸ್ವಲ್ಪವಾದರೂ ಸಭ್ಯತೆ ಇರಲಿ………!!!

ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಓಡಾಡಬೇಕಾದ ಅನಿವಾರ್ಯತೆ ಬಂದಿತ್ತು. ಪ್ರಾಜೆಕ್ಟ್  ವರ್ಕ್ ಭೂತ ತಲೆಯ ಮೇಲೆ ಕೂತಿತ್ತು ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಕೆಲಸ ಅದು, ಇಂಜಿನಿಯರಿಂಗ್ ಮುಗಿದು ಹೋಯ್ತು ಅಂತ ಅಂದುಕೊಳ್ಳುತ್ತಿರುವಾಗಲೇ ಇದೊಂದು ಕೆಲಸ ಬಾಕಿ ಇದೆ ಎಂದು ಆಗಾಗ ಮೊಟಕುವ ಕುಟುಕುವ ವಸ್ತು ಈ ಪ್ರಾಜೆಕ್ಟ್ ವರ್ಕ್.
         ಅದೇ ಗುಂಗಿನಲ್ಲಿ ಮಡಿವಾಳ ಸಿಲ್ಕ್ ಬೋರ್ಡ್ ಅಲ್ಲಿ 201 no ಬಸ್ ಹತ್ತಿದೆ. ಅದೇನೋ ನನ್ನ ಅದೃಷ್ಟ ಬಸ್ ಖಾಲಿ ಖಾಲಿ ಆಗಿತ್ತು. ಬಂದು ಹಿಂದಿನ ಸೀಟ್ ಅಲ್ಲಿ ಕಿಟಕಿ ಪಕ್ಕ ಕೂತೆ. ೪೦ ರುಪಾಯಿ ಕೊಟ್ಟು ಪಾಸು ತೆಗೆದುಕೊಂಡರೆ ಇಡಿ ಬೆಂಗಳೂರೇ ತಿರುಗಬಹುದಾದ ಒಂದು ಸೌಕರ್ಯ ನಿಮಗೆಲ್ಲ ಗೊತ್ತಿರುವಂತೆ ಇಲ್ಲಿದೆ. ನಾನು ಅ ಪಾಸ್ ಖರೀದಿಸಿಯೇ ಓಡಾಡುತಿದ್ದೆ. ಬಸ್ ನಲ್ಲಿ ಕಡೆಯ ಸೀಟ್ ಅಲ್ಲಿ ಯುವ ಜೋಡಿಯೊಂದು ಕೂತಿತ್ತು.ನನ್ನ ಪಕ್ಕ ಒಬ್ಬ ತಾತ ಬಂದು ಕೂತರು, ಸುತ್ತಲು ಒಂದಷ್ಟು ಹಿರಿಯರು ಇದ್ದರು. ನನಗೋ, ಎಲ್ಲರಿಗು ಇದ್ದಂತೆ ಆ ಯುವ ಜೋಡಿಯನ್ನು ನೋಡುವ ಕುತೂಹಲ, ಅ ಕುತೂಹಲದಿಂದಲೇ ಆಗಾಗ ಮೆಲ್ಲಗೆ ಅವರಿಗೆ ತಿಳಿಯದಂತೆ ಅವರನ್ನು ಗಮನಿಸುತ್ತ ಇದ್ದೆ. ನಾ ಮಾತ್ರ ಅಲ್ಲ ಅಲ್ಲಿದ್ದ ಎಲ್ಲರು ತಮ್ಮ ಗಮನವನ್ನು ಅ ಕಡೆ ಇಟ್ಟುಕೊಂಡೆ ಇದ್ದರು. ಕ೦ಡಕ್ಟರ್ ಟಿಕೆಟ್ ಕೊಡುವ ನೆಪದಲ್ಲಿ ಆಗಾಗ ಹಿಂದೆ ಬಂದು ಮುಖ ಸಿಂಡರಿಸುತ್ತ  ಹೋಗುತಿದ್ದ. ನನಗಂತೂ ಇನ್ನು ಕುತೂಹಲ ಹೆಚ್ಚಾಯಿತು. ಇನ್ನು ಸ್ವಲ್ಪ ಗಮನಿಸಿದೆ ಅ ಹುಡುಗ ಹುಡುಗಿಯ ಹೆಗಲ ಮೇಲೆ ಕೈ ಹಾಕಿಕೊಂಡಿದ್ದ, ಆಗಾಗ ಕಿವಿಯಲ್ಲಿ ಏನೇನೋ ಹೇಳುತಿದ್ದ, ಒಂದೆರಡು ಬರಿ ಮುತ್ತನ್ನು ಕೊಟ್ಟ. ಹೀಗೆ ಒಂದೆರಡು ಸ್ಟಾಪ್ ಆದಮೇಲೆ ಕ೦ಡಕ್ಟರ್ ಬಂದವನೇ, ಎದ್ದೆಲ್ರಿ ಮೇಲೆ ನೀವು ಅಂದ, ಅದಕ್ಕವರು ಯಾಕೆ ಅಂತ ಬಲು ದರ್ಪದಿಂದ ಕೇಳಿದರು ಅದಕ್ಕೆ ನಮ್ಮ ಕ೦ಡಕ್ಟರ್, ನಾನು ನೋಡ್ತಾನೆ ಇದೀನಿ ಆಗ್ಲಿಂದ ಏನು ನೀವು ಮಾಡ್ತಿರೋ ಕೆಲಸ?? ಇದೆಲ್ಲ ಮಾಡೋಹಾಗಿದ್ರೆ ಲಾಲ್ ಭಾಗೋ ಕಬ್ಬನ್ ಪರ್ಕೋ ಹೋಗಿ, BTS ಬಸ್ ಏನು ಬೆಡ್ ರೂಂ ಅಂದುಕೊಂಡಿದ್ದಿರ ಅಂತ ಸರಿಯಾಗಿ ಚಾರ್ಜ್ ತೊಗೊಂಡ. ಅಷ್ಟರಲ್ಲೇ ಅಲ್ಲಿದ್ದ ಜನರು ಕೂಡ ಏನಮ್ಮ , ನಿನಗಾದ್ರು ಮಾನ ಮರ್ಯಾದೆ ಇಲ್ವಾ ಎಲ್ಲಿರೋದು ನಿಮ್ಮ ಮನೆ, ಏನು ನಿಮ್ಮ ತಂದೆ ಹೆಸರು ಅಂತ ಎಲ್ಲ ಪ್ರಶ್ನೆ ಮಾಡಲು ಶುರು ಮಾಡಿದ್ದರು. ಅಷ್ಟರಲ್ಲೇ ಮುಂದಿನ ಸ್ಟಾಪ್ ಬಂದಿತ್ತು ಇಬ್ಬರು ಇಳಿದು ಏನು ಮಾತನಾಡದೆ ಕಾಲುಕಿತ್ತರು.
         ಅವರಿಬ್ಬರೂ ಪ್ರೆಮಿಗಳಾಗಿರಬಹುದು. ಎರಡು ದೇಹ ಒಂದೇ ಅತ್ಮವಾಗಿರಬಹುದು ಆದರೆ ಅದನ್ನು ತೋರ್ಪಡಿಸಿಕೊಳ್ಳುವಂತ ಸ್ಥಳ ಅದಲ್ಲ.ಸಾರ್ವಜನಿಕ ಸ್ಥಳಗಳಲ್ಲಿ ಅಷ್ಟೊಂದು ಪ್ರೀತಿಯ ನಿವೇದನೆ ಮಾಡಬಾರದು ಅನ್ನುವುದು ನನ್ನ ಅಭಿಪ್ರಾಯ. ಅವರು ಇಳಿದು ಹೋದಮೇಲೆ ಅ ಕ೦ಡಕ್ಟರ್ ಹೇಳಿದರು ಸರ್ ಅವರದ್ದು ಎಲ್ಲಿ ಬೇಕಾದರು ಓಡಾಡಬಹುದಾದಂತ ಪಾಸು, ಕಾಲೇಜ್ ಗೆ ಹೋಗದೆ ಬಸ್ ಗಳಲ್ಲಿ ಕಡೆಯ ಸೀಟ್ ಗಳಲ್ಲಿ ಕೂತು ತಿರುಗಾಡುವುದೇ ಇವರ ಕೆಲಸ. ನಾನು ಆಗಾಗ ನೋಡುತ್ತಿರುತ್ತೇನೆ, ಆದರೆ ನನಗ್ಯಾಕೆ ಅವರಿವರ ತಂಟೆ ಎಂದು ಏನು ಕೇಳುತ್ತಿರಲಿಲ್ಲ. ನನಗೂ  ಅ ಹುಡುಗಿಯದೆ ವಯಸ್ಸಿನ ಮಗಳಿದ್ದಾಳೆ, ಒಮ್ಮೊಮ್ಮೆ ಭಯವಾಗುತ್ತದೆ ಸರ್ ಇಂತವರನ್ನ ನೋಡಿದ್ರೆ ಅಂದ. ಖಂಡಿತ ಅವನ ಮನಸ್ಸಿನ್ನಲಿ ಎಷ್ಟು ಭಯ ಹುಟ್ಟಿರಬಹುದಲ್ವಾ??
          ಇಂಥಹ ಕೆಲವು ಯುವ ಪ್ರೇಮಿಗಳಿಂದ ಇಡೀ ಪ್ರೇಮಿಗಳ ಸಮಾಜವೇ ಮುಜುಗರಕ್ಕೊಳಗಾಗಬಹುದಲ್ವೆ?? ಪ್ರೀತಿಸುವುದು ತಪ್ಪಲ್ಲ, ಆದರೆ ನಿಮ್ಮ ಪ್ರೀತಿ ತೋರ್ಪಡಿಕೆಯದ್ದಾಗದಿರಲಿ. ನಾಲ್ಕು ಜನ ಇದ್ದಾರೆ ಅವರ ಮುಂದೆ ನನ್ನ ಗೆಳತಿ ಅಥವಾ ಗೆಳೆಯ ನನ್ನ ಮುದ್ದಿಸಬೇಕು, ನನಗೆ ತಿನ್ನಿಸಬೇಕು ಎಂದೆಲ್ಲ ನಿರೀಕ್ಷೆ ಬೇಡ. ಒಂದು ಪಕ್ಷ ಮದುವೆಯಾಗಿದ್ದಲ್ಲಿ  ನಿಮಗಿಷ್ಟ ಬಂದಂತೆ ಇರಬಹುದಂತೇನಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಕ್ಕ ಜನರಿದ್ದಾರೆ ಎಂಬ ತಿಳುವಳಿಕೆಯಿಂದ ವರ್ತಿಸಿದರೆ ಸಾಕು. ಇಷ್ಟು ಮಾತ್ರವಲ್ಲದೆ ಬೆಂಗಳೂರಿನ ಯಾವ ಮಾಲ್ಗಳಿಗೆ ಹೋದರು ಪ್ರೇಮಿಗಳದೆ ಕಾರುಬಾರು, ಯಾವ ಪಾರ್ಕ್ ಗಳಿಗೆ ಹೋದರು ಪ್ರೆಮಿಗಲದೆ ದರ್ಬಾರು. ಇತ್ತೀಚಿಗೆ ಪ್ರೇಮ ಫಲಿಸಲಿ ಎಂದೋ ಏನೋ ದೇವಾಲಯಗಳಲ್ಲೂ ತುಂಬಿಕೊಂಡಿರುತ್ತಾರೆ. ಅವರು ಎಲ್ಲಿ ಬೇಕಾದರೂ ಇರಲಿ ಆದರೆ ಹೇಗೆ ಬೇಕಾದರೂ ಇರುವುದು ಬೇಡ. ನಾ ಇಲ್ಲಿ moral policing  ಮಾಡುತ್ತಿಲ್ಲ. ಸಮಾಜದಲ್ಲಿ ಸ್ವಲ್ಪವಾದರೂ ಸಭ್ಯತೆ ಕಾಣಲಿ ಎಂಬ ಬಯಕೆ ಅಷ್ಟೇ. ಹಾಗಂತ ಎಲ್ಲರು ಹೀಗೆ ಇರುವುದಿಲ್ಲ. ಇರಲಿ ಎಲ್ಲಾ ಕಡೆ  ಪ್ರೇಮಿಗಳು, ಆದರೆ  ಅವರ ಮನಸ್ಸಿನಲ್ಲಿ, ಸುತ್ತಲು ತಮ್ಮ ತಂದೆ ತಾಯಂದಿರ ವಯಸ್ಸಿನ ಜನ ಇರುತ್ತಾರೆ, ತಾತಂದಿರು ಅಜ್ಜಿಯಂದಿರು ಇರುತ್ತಾರೆ, ತಮಗಿಂತ ಪುಟ್ಟ ಮಕ್ಕಳು ಇರುತ್ತಾರೆ ಅವರ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಅವರು ತಮ್ಮ ಬಗ್ಗೆ ಯಾವ ರೀತಿ ಆಲೋಚಿಸಬಹುದು ಎಂಬುದರ ಅರಿವಿರಲಿ. ಅಯ್ಯೋ ಯಾರು ಏನು ಅಂದುಕೊಂಡರೆ ನಮಗೇನು ಎಂಬ ಉಡಾಫೆ ಬೇಡ. ಪ್ರೇಮಿಗಳಿಗೆಲ್ಲ ನನ್ನ ಪ್ರೀತಿಯ ಕಡೆಯ ವಿನಂತಿ,

ಮಿಡಿಯುವ ಮನಸುಗಳು ಎಂದೆಂದು ಇರಲಿ
ಪ್ರೇಮಿಗಳ ಕನಸುಗಳು ನನಸಾಗುತಿರಲಿ
ನಿಮ್ಮಗಳ ಪ್ರೇಮಕ್ಕೆ ಎಂದು ತೊಡಕಾಗದಿರಲಿ

                                           ” ಸ್ವಲ್ಪವಾದರೂ ನಿಮ್ಮ ಪ್ರೇಮದಲ್ಲಿ ಸಭ್ಯತೆ ಇರಲಿ “
Posted in Uncategorized | Leave a comment

ಗತಂ ಗತಂ

ನಮಮ್ಮನಿಗೆ ಇದ್ದಕ್ಕಿದ್ದ ಹಾಗೆ ಅಕ್ಕನ ನೆನಪಾಗಿ ನನ್ನ ಕೇಳಿದ್ರು ಕರೆದು ಕೊಂಡು ಹೋಗು ಅಂತ, ನನಗು ಮಾಡಕ್ ಏನು ಕೆಲಸ ಇಲ್ಲದ ಕಾರಣ elecronic ಸಿಟಿ ಕಡೆ ಪ್ರಯಾಣ ಮಾಡಿದೆ. ನಾನು ಅವರ ಮನೆಗೆ ಹೋಗಿ ಸುಮಾರು ೪ ವರ್ಷ ಗಳಾಗಿತ್ತು ಹೋಗಿ ಅವರ ಮನೆ ಸೇರಿದ ತಕ್ಷಣ ಉಭಯ ಕುಶಲೋಪರಿಗಳನ್ನು ಮುಗಿಸಿ ಚೌ ಚೌ ಬಿಸ್ಕತ್ತು ತಿನ್ನುತ್ತ ಮಾತನಾಡುತ್ತಿರುವಾಗ ನಮ್ಮ ಅಣ್ಣ ನಮ್ಮ ತಾಯಿಗೆ ಹೇ ನಿನ್ನ 2nd year BA ದು ಒಂದು ಪುಸ್ತಕ ಹಾಗೆ ಇಟ್ಟಿದಿನಿ ಕಣೆ ಅಂದ ( ಹೆಚ್ಹು ಸಲಿಗೆ ಚಿಕ್ಕಮ್ಮ ಆದರು ಹೋಗೆ ಬಾರೆ ಎಂದೆ ಮಾತನಾಡುತ್ತಾರೆ ) ನಮಮ್ಮ ಯಾವುದೊ ಅದು ಅಂದ್ರು ಅದಕ್ಕೆ ನಮ್ಮಣ್ಣ untouchable ಅಂತ ನೆನಪಿದ್ಯ ಅಂದ್ರು ಅಮ್ಮ ಹೌದು ಹೌದು ಇನ್ನು ಇತ್ತಿದ್ಯ good ಅಂದ್ರು ಅದಕ್ಕವ ನಾನು ಮಾತ್ರ ಯಾರಿಗೂ ಪುಸ್ತಕ ಕೊಡೋದಿಲ್ಲಪ ಅದನ್ನ ಯಾರಿಗದ್ರು ಕೊಟ್ರೆ ವಾಪಾಸ್ ಬರೋದೆ ಕಷ್ಟ ಅದಕ್ಕೆ ಜೋಪಾನವಾಗಿ ಜೋಡಿಸ್ತೀನಿ ಸಮಯ ಸಿಕ್ಕಾಗ ಓದ್ತಾ ಇರ್ತೀನಿ ಅಂದ ಅಷ್ಟರಲ್ಲೇ ಅಲ್ಲೇ ಕೂತಿದ್ದ ನಮ್ಮ ದೊಡ್ಡಪ್ಪ ಕಣಗಾಲ್ ಶಂಕರ್ ನಾರಾಯಣ್ ( ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಮೊದಲನೇ ತಮ್ಮ ) ಒಂದು ಮಾತು ಹೇಳಿದರು ” ಪುಸ್ತಕಂ ವನಿತಂ ವಿತ್ತಂ ಪರ ಹಸ್ತೇ ಗತಂ ಗತಂ ” ಆಹಾ ಎಷ್ಟು ಅರ್ಥ ಗರ್ಭಿತವಾಗಿದೆ ಈ ಮಾತು ಪುಸ್ತಕ ಅಗಲಿ ಹೆಣ್ಣಾಗಲಿ ಹಣ ಅಗಲಿ ಇನ್ನೊಬ್ಬರ ಕೈಗೆ ಹೋದರೆ ಅದು ಹೋದಂತಯೇ ತಿಳಿಯಬೇಕು ಅಕಸ್ಮಾತ್ ಮತ್ತೆ ಬಂದರು ಅದು ಸರಿಯಾಗಿ ಬರುವುದು ಬಹಳ ಕಷ್ಟ , ಸರಿಯಾದ ಮಾತು ನನ್ನ ಜೆವನದಲ್ಲೇ ಅಂತ ಸಂಗತಿಗಳು ನಡೆದಿವೆ ನಾನು ೫ನೆ ತರಗತಿ ಓದೋವಾಗ ನನಗೆ ಬಹುಮಾನವಾಗಿ ಬಂದಿದ್ದ ಒಂದು ಜನರಲ್ knowledge ಪುಸ್ತಕವನ್ನ ತೆಗೆದುಕೊಂಡಿದ್ದ ಮೇಸ್ಟ್ರು ನಾನು ಪ್ರೌಢ ಶಾಲೆ ಸೇರುವರೆಗೂ ಕೇಳಿದ್ರು ವಾಪಾಸ್ ಕೊಡಲಿಲ್ಲ ಕೇಳಿದಾಗೆಲ್ಲ ಎಲ್ಲೋ ಇಟ್ಟು ಬಿಟ್ಟಿದ್ದೀನಿ, ನನ್ನ ಮಗಳು ಸ್ಕೂಲ್ ಗೆ ತೊಗೊಂಡು ಹೋಗಿದ್ದಾಳೆ, ನಮ್ಮಕ್ಕನ್ ಮಗ ಓದ್ತಾ ಇದಾನೆ, ಇವತ್ ತೆಗೆದು ಇಟ್ಟಿದ್ದೆ TV ಹತ್ರ ಮರ್ತು ಬಂದಿದೀನಿ, ಹೀಗೆ ಕಾರಣ ಕೊಟ್ಟು ಕೊಟ್ಟು ಕಡೆಗೆ ನಂಗೆ ಬೇಜಾರಾಗಿ ಕೇಳೋದು ನಿಲ್ಲಿಸಿಬಿಟ್ಟೆ . ಇನ್ನು ಹಣದ ವಿಷಯಕ್ಕೆ ಬಂದರೆ PUC ಅಲ್ಲಿ snooker ಆಡುವ ಹುಚ್ಚು ಆಗ JP ನಗರದ ಒಂದು snooker parlour ಅಲ್ಲಿ ನಾವೆಲ್ಲ ಸ್ನೇಹಿತರು ಅಡುತಿದ್ದೆವು ಅಲ್ಲಿ ನನ್ನ ಕೆಲವು ಗೆಳೆಯರು account ಇಟ್ಟು ಅಡುತಿದ್ದರು ಅ parlour ಯಜಮಾನ ಅಲ್ಲಿ ಸ್ವಲ್ಪ ಹವಾ ಇಟ್ಟಿರೋ ಮನುಷ್ಯ. PU ಫೈನಲ್ exam ಹಾಲ್ ಟಿಕೆಟ್ ತೆಗೆದು ಕೊಂಡು ಕುಷಿಯಾಗಿ ಒಂದೆರಡು ಬೋರ್ಡ್ ಆಡೋಣ ಅಂತ ಹೋದರೆ ಆ parlour owner ಎಲ್ಲಿ ಮಗ ಹಾಲ್ ಟಿಕೆಟ್ ತೋರ್ಸಿ ಅಂತ ಒಂದಿಬ್ಬರದು ತೊಗೊಂಡು ಬ್ಯಾಲೆನ್ಸ್ settle ಮಾಡಿ ನಂತರ ಹಾಲ್ ಟಿಕೆಟ್ ಕೊಡ್ತೀನಿ ಅಂತ ಸತಾಯಿಸಿದ ನಮ್ಮ ಹುಡುಗ್ರು ಎಷ್ಟು ಕೆಳ್ಕೊಂದ್ರು ಕೊಡಲಿಲ್ಲ ಕಡೆಗೆ ನನ್ನ ಬಳಿ ಉಳಿಸಿದ್ದು ಪಳಿಸಿದ್ದು ಸುಮಾರು ಒಂದು ಸಾವಿರ ಇಟ್ಟು ಅದನ್ನ ಕೊಟ್ಟು ಬೇಗ ವಾಪಾಸ್ ಕೊಡಬೇಕು ಮಗ ಅಂದೆ ಸುಮಾರು 7 ವರ್ಷ ಆಯಿತು ಇನ್ನು ಹಣ ವಾಪಾಸ್ ಬಂದಿಲ್ಲ ಈಗ ಕೆಳಕ್ಕೂ ಆಗಲ್ಲ. ಇನ್ನು ಹುಡುಗಿ ವಿಷಯ ನನಗೆ ಅನುಭವಕ್ಕೆ ಬಂದಿಲ್ಲ ನಮ್ಮ ಸ್ನೇಹಿತರು ಹೇಳ್ತಾ ಇರ್ತಾರೆ ಮಗ ಸುಮ್ನೆ ಫ್ರೆಂಡ್ ಮಾಡಿ ಕೊಟ್ಟೆ ಪಟಯಿಸ್ಕೊಂಡು ಬಿಟ್ಟ ಅಂತ , ಅದಕ್ಕೆ ದಯವಿಟ್ಟು ಗೆಳೆಯರೇ ಈ ಮೂರರ ಬಗ್ಗೆ ಜೋಪಾನ ಹುಷಾರಾಗಿ handle ಮಾಡಿ ……

Posted in Uncategorized | Leave a comment